Best Sankranti Wishes in Kannada 2026 (Images) | ಹೃದಯಸ್ಪರ್ಶಿ ಸಂಕ್ರಾಂತಿ ಶುಭಾಶಯಗಳು

Sankranti Wishes in Kannada 2026 | ಅತ್ಯುತ್ತಮ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಕರ ಸಂಕ್ರಾಂತಿಯನ್ನು ಆಚರಿಸಲು ಅನನ್ಯ ಮತ್ತು ಹೃತ್ಪೂರ್ವಕ ಶುಭಾಶಯಗಳ ಪಟ್ಟಿ ಈ ಲೇಖನದಲ್ಲಿದೆ. ನಿಮ್ಮೊವರ ಜೊತೆ ಇದನ್ನು ಹಂಚಿಕೊಳ್ಳಬಹುದು.

Sankranti Wishes in Kannada 2026 (Intro)

ಎಲ್ಲ ಕನ್ನಡಿಗರಿಗೂ Sankranti Wishes in Kannada | ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದು ತಿಳಿಸುತ್ತಾ ಈ ಲೇಖನದಲ್ಲಿರುವ ಶುಭಾಶಯಗಳ ಪಟ್ಟಿಯನ್ನು ನೋಡುವ ಮೊದಲು, ಸಂಕ್ರಾಂತಿ ಹಬ್ಬದ ಬಗ್ಗೆ ಕೆಲವಷ್ಟು ಕುತೂಹಲಕಾರಿಯಾದ ಮಾಹಿತಿಯನ್ನು ನೋಡೋಣ.


ಪರಿಚಯ

ಸಂಕ್ರಾಂತಿ ಹಬ್ಬ ಹಿಂದೂ ಸಂಪ್ರದಾಯದಲ್ಲಿ ಬಹಳ ಪವಿತ್ರವಾದ ಹಬ್ಬ. ಈ ಹಬ್ಬವನ್ನು ಮಕರ ಸಂಕ್ರಾಂತಿ ಎಂದು ಕೂಡ ಕರೆಯುತ್ತಾರೆ. ಇದು ಒಂದು ರಾಶಿಯಿಂದ ಇನ್ನೊಂದಕ್ಕೆ ಸೂರ್ಯನ ಪರಿವರ್ತನೆಯನ್ನು ಸೂಚಿಸುತ್ತದೆ. “ಸಂಕ್ರಾಂತಿ” ಎಂಬ ಪದವು ಸಂಸ್ಕೃತದಲ್ಲಿ “ಪರಿವರ್ತನೆ” ಅಥವಾ “ಚಲನೆ” ಎಂದರ್ಥ, ಮತ್ತು ಇದು ನಿರ್ದಿಷ್ಟವಾಗಿ ಒಂದು ರಾಶಿಯಿಂದ ಇನ್ನೊಂದಕ್ಕೆ (ಮಕರ ರಾಶಿ) ಸೂರ್ಯನ ಚಲನೆಯನ್ನು ಸೂಚಿಸುತ್ತದೆ.


ಸಂಕ್ರಾಂತಿ ಹಬ್ಬದ ಮಹತ್ವ ಏನು ?

ಒಂದು ವರ್ಷದಲ್ಲಿ ಒಟ್ಟು 12 ಸಂಕ್ರಾಂತಿಗಳು ಬರುತ್ತವೆ. ಇದರಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಸ್ಥಾನಮಾನ. ಮಕರ ಸಂಕ್ರಾಂತಿಯು ವಿಶೇಷವಾಗಿ ಮಹತ್ವದ್ದಾಗಿದೆ ಏಕೆಂದರೆ ಇದು ಚಳಿಗಾಲದ ಅಂತ್ಯ ಮತ್ತು ದೀರ್ಘ ದಿನಗಳ (daylight hours) ಆರಂಭವನ್ನು ಸೂಚಿಸುತ್ತದೆ.

ಈ ಖಗೋಳ ಬದಲಾವಣೆಯು ಸೂರ್ಯನ ಉತ್ತರಾಯಣದ (ಉತ್ತರದ ಪ್ರಯಾಣ) ಆರಂಭವನ್ನು ಸೂಚಿಸುತ್ತದೆ, ಇದನ್ನು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಅವಧಿಯು ಬೆಳೆ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಜ್ಞಾನೋದಯದೊಂದಿಗೆ ಸಂಬಂಧಿಸಿದೆ. ಹೀಗಾಗಿ, ಮಕರ ಸಂಕ್ರಾಂತಿ ಎಂಬ ಹೆಸರು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

ಈ ದಿನದಂದು ಭಕ್ತರು ನಮ್ಮ ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಗೋದಾವರಿ ನದಿಯಲ್ಲಿ ಸ್ನಾನಮಾಡುತ್ತಾರೆ. ಇದರಿಂದ ಪಾಪ ಕರ್ಮಗಳು ಕಳೆಯುತ್ತವೆ ಎಂದು ನಂಬಲಾಗಿದೆ.

Sankranti wishes in Kannada 2026

ಮಕರ ಸಂಕ್ರಾಂತಿ ಹಬ್ಬದ ಇತಿಹಾಸ ಏನು ?

ಮಕರ ಸಂಕ್ರಾಂತಿ ಹಬ್ಬ ಯಾವಾಗ ಪ್ರಾರಂಭವಾಯಿತು ಎಂದು ತಿಳಿಯುವುದು ಕಷ್ಟ ಏಕೆಂದರೆ, ಇದು ಭಾರತೀಯ ಸಂಸ್ಕೃತಿಯಲ್ಲಿ ಬಹಳ ವರ್ಷಗಳಿಂದ ಆಚರಣೆಯಲ್ಲಿದೆ. ಈ ಹಬ್ಬಕ್ಕೆ ಸಾವಿರಾರು ವರ್ಷಗಳ ಅಂದರೆ ಸುಮಾರು 4,000 ವರ್ಷಗಳ ಇತಿಹಾಸ ಇದೆ ಎಂದು ಹೇಳಬಹುದು.

ಮಹಾಭಾರತ ಮತ್ತು ಕೆಲವು ಹಿಂದೂ ಪುರಾಣಗಳಲ್ಲಿ ಮಕರ ಸಂಕ್ರಾಂತಿ ಬಗ್ಗೆ ಉಲ್ಲೇಖವಿದೆ.

ಮಹಾಭಾರತದಲ್ಲಿ ಬರುವ ಮುಖ್ಯ ಪಾತ್ರಗಳಲ್ಲಿ ಒಂದಾದ ಭೀಷ್ಮ ಪಿತಾಮಹ ತನ್ನ ದೇಹತ್ಯಾಗ ಈ ದಿನದಂದು ಮಾಡಿದರು ಎಂದು ನಂಬಲಾಗಿದೆ. ಏಕೆಂದರೆ ಈ ಸಮಯ ಉತ್ತರಾಯಣದ ಸಮಯ ಮತ್ತು ಬಹಳ ಪವಿತ್ರವಾದ ಸಮಯ.

ಸ್ಕಂದ ಪುರಾಣ ಮತ್ತು ಭವಿಷ್ಯ ಪುರಾಣವು ಮಕರ ರಾಶಿಗೆ ಸೂರ್ಯನ ಪರಿವರ್ತನೆ ಮತ್ತು ಅದರ ಆಧ್ಯಾತ್ಮಿಕ ಮಹತ್ವವನ್ನು ಉಲ್ಲೇಖಿಸುತ್ತದೆ.

ಕರ್ನಾಟಕದಲ್ಲಿ ಈ ಹಬ್ಬದ ದಿನ, “ಎಲ್ಲು-ಬೆಲ್ಲ” (ಎಳ್ಳು ಬೀಜಗಳು, ಬೆಲ್ಲ ಮತ್ತು ಕೊಬ್ಬರಿ ಮಿಶ್ರಣ) ಅನ್ನು ಸದ್ಭಾವನೆಯ ಸಂಕೇತವಾಗಿ ವಿನಿಮಯ ಮಾಡಿಕೊಳ್ಳುತ್ತಾರೆ, ಇದು ಏಕತೆ ಮತ್ತು ಸಾಮರಸ್ಯವನ್ನು ಸಂಕೇತಿಸುತ್ತದೆ.

ತಮಿಳುನಾಡಿನಲ್ಲಿ ಈ ಹಬ್ಬವನ್ನು, ಕೃಷಿಗೆ ನೀಡಿದ ಕೊಡುಗೆಗಾಗಿ ಪ್ರಕೃತಿ ಮತ್ತು ಜಾನುವಾರುಗಳಿಗೆ ಧನ್ಯವಾದ ಹೇಳುವ ಹಬ್ಬವನ್ನು ಪೊಂಗಲ್ ಎಂದು ಆಚರಿಸಲಾಗುತ್ತದೆ.

ಪಂಜಾಬಿನಲ್ಲಿ ಈ ಹಬ್ಬವನ್ನು ಲೋಹ್ರಿ ಎಂದು ಆಚರಿಸಲಾಗುತ್ತದೆ. ಇದು ದೀಪೋತ್ಸವಗಳು ಮತ್ತು ಸಾಂಪ್ರದಾಯಿಕ ಪಂಜಾಬಿ ಆಚರಣೆಗಳನ್ನು ಒಳಗೊಂಡಿರುತ್ತದೆ.

ಗುಜರಾತ್ ಮತ್ತು ರಾಜಸ್ಥಾನದಲ್ಲಿ ಉತ್ತರಾಯಣ ಎಂದೂ ಆಚರಿಸುತ್ತಾರೆ. ಇದರಲ್ಲಿ ಗಾಳಿಪಟ ಹಾರಿಸುವುದು ಒಂದು ಪ್ರಮುಖ ಸಂಪ್ರದಾಯವಾಗಿದೆ, ಇದು ಸಂತೋಷ ಮತ್ತು ಸ್ವಾತಂತ್ರ್ಯವನ್ನು ಸಂಕೇತಿಸುತ್ತದೆ.


ಮಕರ ಸಂಕ್ರಾಂತಿಯಂದು ಎಳ್ಳು ಬೆಲ್ಲವನ್ನು ಏಕೆ ಹಂಚುತ್ತಾರೆ ?

ಇಲ್ಲಿ ನನಗೊಂದು ಸಂದೇಹ ಬಂತು. ಎಳ್ಳು ಬೆಲ್ಲವನ್ನೇ ಏಕೆ ಈ ಸಮಯದಲ್ಲಿ (ಹಬ್ಬದಲ್ಲಿ) ಹಂಚುತ್ತಾರೆ ಎಂದು. ಇದಕ್ಕೆ ಉತ್ತರ ಹುಡುಕುತ್ತಾ ಹೊರಟಾಗ ಹಲವಾರು ಕುತೂಹಲಕಾರಿ ಮಾಹಿತಿ ತಿಳಿದುಬಂತು. ಅದೇನೆಂದು ಈಗ ನೋಡೋಣ.

ಏಕತೆ ಮತ್ತು ಸಾಮರಸ್ಯದ ಸಂಕೇತ

ಎಳ್ಳು, ಬೆಲ್ಲ ಜೊತೆಗೆ ಹುರಿದ ಕಡಲೆಕಾಯಿ ಮತ್ತು ಒಣಗಿದ ತೆಂಗಿನಕಾಯಿಯಂತಹ ವೈವಿಧ್ಯಮಯ ಪದಾರ್ಥಗಳ ಮಿಶ್ರಣವು ವೈವಿಧ್ಯತೆ ಮತ್ತು ಏಕತೆಯ ಕಲ್ಪನೆಯನ್ನು ಪ್ರತಿನಿಧಿಸುತ್ತದೆ. ಭಿನ್ನಾಭಿಪ್ರಾಯಗಳಿದ್ದರೂ ಸಹ, ಸಂಬಂಧಗಳಲ್ಲಿ ಮಾಧುರ್ಯ ಕಾಪಾಡಿಕೊಳ್ಳಲು ಇದು ಜ್ಞಾಪನೆಯಾಗಿದೆ.

ವೈಜ್ಞಾನಿಕ ಮತ್ತು ಆರೋಗ್ಯ ಪ್ರಯೋಜನಗಳು

ಮಕರ ಸಂಕ್ರಾಂತಿ ಚಳಿಗಾಲದ ಮಧ್ಯದಲ್ಲಿ ಬರುತ್ತದೆ, ದೇಹಕ್ಕೆ ಉಷ್ಣತೆ ಮತ್ತು ಶಕ್ತಿಯ ಅಗತ್ಯವಿರುವ ಸಮಯ. ಈ ಪ್ರಯೋಜನಗಳನ್ನು ಒದಗಿಸಲು ಎಳ್ಳು ಬೆಲ್ಲ ಮತ್ತು ಇತರ ಪದಾರ್ಥಗಳನ್ನು ನಿರ್ದಿಷ್ಟವಾಗಿ ಆಯ್ಕೆಮಾಡಲಾಗಿದೆ.

ಎಳ್ಳು: ಆರೋಗ್ಯಕರ ಕೊಬ್ಬು(Healthy Fat ), ಕ್ಯಾಲ್ಸಿಯಂ ಮತ್ತು ಕಬ್ಬಿಣದಿಂದ ಸಮೃದ್ಧವಾಗಿರುವ ಎಳ್ಳು, ದೇಹವನ್ನು ಬೆಚ್ಚಗಾಗಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಬೆಲ್ಲ: ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳಿಂದ ತುಂಬಿದ ನೈಸರ್ಗಿಕ ಸಿಹಿಕಾರಕ, ಬೆಲ್ಲವು ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆಯಲು ಸಹಾಯ ಮಾಡುತ್ತದೆ.

ಹುರಿದ ಕಡಲೆಕಾಯಿ ಮತ್ತು ಒಣಗಿದ ಕೊಬ್ಬರಿ: ಹೆಚ್ಚಿನ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು, ಚಳಿಗಾಲದಲ್ಲಿ ನಿರಂತರ ಶಕ್ತಿಯನ್ನು ನೀಡುತ್ತವೆ.

ಒಟ್ಟಾರೆ, ಎಳ್ಳು ಮತ್ತು ಬೆಲ್ಲದ ಸೇವನೆಯು ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಶೀತ, ಕೆಮ್ಮು ಮತ್ತು ಕೀಲು ನೋವಿನಂತಹ ಋತುಮಾನದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.


ಮಕರ ಸಂಕ್ರಾಂತಿ ಆಚರಣೆ ಹೇಗೆ ?

ಈ ಮಕರ ಸಂಕ್ರಾಂತಿ ಹಬ್ಬವನ್ನು ಹೇಗೆ ಆಚರಣೆ ಮಾಡುವುದು ಎಂದು ಕೆಳಗೆ ನೋಡೋಣ.

ಪವಿತ್ರ ಸ್ನಾನ ಮತ್ತು ಪ್ರಾರ್ಥನೆಗಳೊಂದಿಗೆ ದಿನವನ್ನು ಪ್ರಾರಂಭಿಸಿ

ಬೆಳಿಗ್ಗೆ ಬೇಗನೆ ಎದ್ದು, ಸಾಧ್ಯವಾದರೆ ನದಿಯಲ್ಲಿ ಸ್ನಾನ ಮಾಡಿ, ಇಲ್ಲದಿದ್ದರೆ ಮನೆಯಲ್ಲೇ ಶುದ್ಧ ನೀರಿನಿಂದ ಸ್ನಾನ ಮಾಡಿ. ಸ್ನಾನ ದೇಹ ಮತ್ತು ಆತ್ಮವನ್ನು ಶುದ್ಧ ಮಾಡುತ್ತದೆ ಎಂದು ನಂಬಲಾಗಿದೆ.

ಸ್ನಾನದ ನಂತರ, ಆರೋಗ್ಯ, ಸಮೃದ್ಧಿ ಮತ್ತು ಅದೃಷ್ಟವನ್ನು ಪಡೆಯುವುದಕ್ಕಾಗಿ ಸೂರ್ಯ ಭಗವಾನ್ (ಸೂರ್ಯ ದೇವರು) ಗೆ ಪ್ರಾರ್ಥನೆಗಳನ್ನು ಸಲ್ಲಿಸಿ. ಕೆಲವು ಮನೆಗಳಲ್ಲಿ, ಜನರು ಗಾಯತ್ರಿ ಮಂತ್ರ ಅಥವಾ ಸೂರ್ಯನಿಗೆ ಸಮರ್ಪಿಸುವ ಇತರ ವೈದಿಕ ಸ್ತೋತ್ರಗಳನ್ನು ಪಠಿಸುತ್ತಾರೆ.

ಮನೆಯನ್ನು ರಂಗೋಲಿ ಮತ್ತು ಮಾವಿನ ಎಲೆಗಳಿಂದ ಅಲಂಕರಿಸಿ

ರಂಗೋಲಿ ಪುಡಿ ಮತ್ತು ಬಣ್ಣದ ಪುಡಿಗಳನ್ನು ಬಳಸಿ ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ಸುಂದರವಾದ ರಂಗೋಲಿ ಬಿಡಿಸಿ. ಸಮೃದ್ಧಿ ಮತ್ತು ಅದೃಷ್ಟವನ್ನು ಸೂಚಿಸಲು ಮಾವಿನ ಎಲೆಗಳು ಮತ್ತು ಕಬ್ಬಿನ ಕೋಲನ್ನು (Sugarcane) ಬಳಸಿ ಮುಖ್ಯ ಬಾಗಿಲನ್ನು ಅಲಂಕರಿಸಿ.

ಎಳ್ಳು-ಬೆಲ್ಲವನ್ನು ಮತ್ತು ವಿತರಿಸಿ

ಹಬ್ಬದ ಕೆಲವೇ ದಿನದ ಮುಂಚೆ ತಯಾರು ಮಾಡಿದ ಎಳ್ಳು ಬೆಲ್ಲ (ಎಳ್ಳು + ಬೆಲ್ಲ + ಹುರಿದ ಶೇಂಗಾ ಬೀಜ + ಕೊಬ್ಬರಿ ಮಿಶ್ರಣ) ಮತ್ತು ಜೊತೆಗೆ ಕಬ್ಬಿನ ತುಂಡಿನ್ನು ನಿಮ್ಮ ಸ್ನೇಹಿತರು ಮತ್ತು ಬಂಧುಗಳ ಮನೆಗೆ ಭೇಟಿ ಕೊಟ್ಟು ವಿತರಣೆ ಮಾಡಿ. ಇದು ಬಲವಾದ ಸಾಮಾಜಿಕ ಬಂಧಗಳನ್ನು ಬೆಳೆಸುತ್ತದೆ.


ಸಂಕ್ರಾಂತಿ ಹಬ್ಬದ ಪೂಜೆ ಹೇಗೆ ಮಾಡುವುದು ?

ಸಂಕ್ರಾಂತಿ ಹಬ್ಬಕ್ಕೆ ವಿಶೇಷವಾದ ಪೂಜೆ ಬೇಕಾದರೆ ನೆರವೇರಿಸಬಹುದು. ಈ ದಿನ ಪೂಜೆಗೆ ಯಾವುದೇ ಕಟ್ಟುನಿಟ್ಟಾದ ನಿಯಮವಿಲ್ಲ. ಸ್ನಾನದ ನಂತರ ಶುದ್ಧ ಬಟ್ಟೆಯನ್ನು ಧರಿಸಿ, ಪೂಜೆಯನ್ನು ನೆರವೇರಸಬಹುದು. ಆದರೇ, ಸೂರ್ಯ ಭಗವಾನ ನನ್ನ ತಪ್ಪದೆ ಜಪಿಸಿ. ಅದು 🕉 ಓಂ ಸೂರ್ಯಾಯ ನಮಃ 🕉 ಎಂದು ಜಪ ಮಾಡಿ.

ನಿಮಗೆ ಗಾಯತ್ರಿ ಮಂತ್ರದ ಜಪ ಗೊತ್ತಿದ್ದರೆ, ಅದನ್ನೂ ಕೂಡಾ ಜಪಿಸಬಹುದು. ಇದನ್ನು ಕನಿಷ್ಠ 108 ಬಾರಿಯಾದರೂ ಜಪಿಸಿ.

Sankranti wishes in Kannada 2026

ಸಂಕ್ರಾಂತಿ ಹಬ್ಬದ ಆಹಾರ ನಿಯಮಗಳು ಯಾವುವು ?

ಈ ಹಬ್ಬಕ್ಕೆ ಯಾವುದೇ ಆಹಾರದ ನಿರ್ಬಂಧವಿಲ್ಲ. ಸಾಧಾರಣವಾಗಿ ಈ ದಿನ ಕೆಳಗೆ ಪಟ್ಟಿಮಾಡಿದ ವಿಶೇಷ ಆಹಾರ ಸೇವನೆ ಮಾಡುತ್ತಾರೆ.

ಸಿಹಿ ಪೊಂಗಲ್, ಖಾರ ಪೊಂಗಲ್, ಎಳ್ಳು ಬೆಲ್ಲ ಮತ್ತು ಸಕ್ಕರೆ ಅಚ್ಚು, ಒಬ್ಬಟ್ಟು ಅಥವಾ ಹೋಳಿಗೆ


ಇದನ್ನೂ ಓದಿ: ಯುಗಾದಿ ಹಬ್ಬದ ಸಂಪೂರ್ಣ ಮಾಹಿತಿ ಮತ್ತು ಶುಭಾಶಯಗಳ ಪಟ್ಟಿ


2026 ಸಂಕ್ರಾಂತಿ ಹಬ್ಬದ ಶುಭಾಶಯಗಳು (Wishes List)

ಇವತ್ತಿನ ಈ ಲೇಖನದಲ್ಲಿ ಒಂದಷ್ಟು ಶುಭಾಶಯಗಳ ಪಟ್ಟಿಯನ್ನು ನಿಮ್ಮ ಮುಂದೆ ಇಟ್ಟಿರುತ್ತೇನೆ. ಇದನ್ನು ನಿಮ್ಮ ಸ್ನೇಹಿತರು ಅಥವಾ ಬಂಧು ಬಾಂಧವರ ಜೊತೆ ಹಂಚಿಕೊಳ್ಳಬಹುದು.

*** ಪ್ರಕಾಶಿಸುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತಸ , ಸಮೃದ್ಧಿ, ಸುಖ-ಶಾಂತಿಯನ್ನು ದಯಪಾಲಿಸಲಿ. ಉದಯರವಿಯು ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿ ಹೊಂದಲಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ***

Sankranti wishes in Kannada 2026

*** ನಾನು ನಿಮ್ಮಿಂದ ದೂರ ಇರಬಹುದು. ಆದರೆ, ನನ್ನ ಪ್ರೀತಿಯ ಶುಭ ಹಾರಿಕೆ ಸದಾ ನಿಮ್ಮೊಂದಿಗಿರುತ್ತದೆ. ಮಕರ ಸಂಕ್ರಾಂತಿ ಹಬ್ಬದ ಹಾರ್ಥಿಕ ಶುಭಾಶಯಗಳು ***

Kannada Sankranti images 2026

*** ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ***


*** ಇದು ವರ್ಷದ ಮೊದಲನೇ ಹಬ್ಬವನ್ನು ಆನಂದಿಸುವ ಸಮಯ. ನಿಮ್ಮೆಲ್ಲರಿಗೂ ದೇವರು ಸಮೃದ್ಧಿ ಮತ್ತು ಸಂತೋಷ ಅನುಗ್ರಹಿಸಲಿ. ಸಂಕ್ರಾಂತಿ ಹಬ್ಬದ ಶುಭಾಶಯಗಳು***

Makar Sankranti quotes in Kannada for friends

Instagram ನಲ್ಲಿ ನಮ್ಮನ್ನು ಫಾಲೋ ಮಾಡಿ 👇

📷 Follow on Instagram

@kannadabestwishes.in


*** ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಮುಂದಿನ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು***


*** ಮಕರ ಸಂಕ್ರಾಂತಿಯಂದು ಹಾರಿಸುವ ಗಾಳಿಪಟದಂತೆ ನೀವೂ ಕೂಡ ಯಶಸ್ಸು ಮತ್ತು ಖುಷಿಯೊಂದಿಗೆ ಬದುಕಿನಲ್ಲಿ ಎತ್ತರಕ್ಕೆ ಬೆಳೆಯಿರಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು***

Kannada Sankranti festival images 2026

*** ನಿಮ್ಮ ಬದುಕಿನ ಎಲ್ಲಾ ಇಷ್ಟಾರ್ಥಗಳು ಕೈಗೂಡಲಿ, ನಿಮ್ಮ ಯಶಸ್ಸಿನ ಹಾದಿಗೆ ಅಡ್ಡ ಇರುವ ಎಲ್ಲಾ ತೊಂದರೆಗಳು ನಿವಾರಣೆಯಾಗಲಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ***


*** ಹೊಸ ಆರಂಭದ ಈ ಶುಭ ದಿನದಂದು ಸೂರ್ಯ ದೇವರು ನಿಮ್ಮ ಬದುಕಿನ ಯಶಸ್ಸಿನ ಬಾಗಿಲನ್ನು ತೆರೆಯಲಿ ಎಂದು ಹಾರೈಸುತ್ತೇನೆ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು***

Makar Sankranti quotes in Kannada for friends

*** ಈ ಸಂಕ್ರಾಂತಿಯ ದಿನದಂದು, ಸೂರ್ಯ ಭರವಸೆಯೊಂದಿಗೆ ಮೇಲೇರುತ್ತಾನೆ… ಗಾಳಿಪಟಗಳು ಹುರುಪಿನಿಂದ ಆಕಾಶದಲ್ಲಿ ಹಾರುತ್ತವೆ… ಬೆಳೆಗಳು ಕೊಯ್ಲಿಗೆ ಸಿದ್ಧವಾಗಿವೆ. ಎಲ್ಲವೂ ಭರವಸೆ, ಸಂತಸ ಮತ್ತು ಸಮೃದ್ಧಿಯ ಪ್ರತೀಕ ***

Ellu Bella images with wishes in Kannada

*** ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಜೀವನದ ಎಲ್ಲ ಕಹಿಗಳನ್ನು ಮರೆತು ಸಿಹಿಯಾದ ಮಾತುಗಳ ಮೂಲಕ ಬಾಂಧವ್ಯವನ್ನು ಬೆಳೆಸೋಣ ***


Download Sankranti Images 2026 – ಸಂಕ್ರಾಂತಿ 2026 ಚಿತ್ರಗಳು


*** ನೀವು ನೀಡುವ ಪ್ರೀತಿ ಮತ್ತು ಬೆಂಬಲ, ಸಂಕ್ರಾಂತಿ ಹಬ್ಬವನ್ನು ಮತ್ತಷ್ಟು ಸಿಹಿಗೊಳಿಸುತ್ತದೆ ***


*** ನಿಮ್ಮ ಮನೆಗೆ ಸಂಕ್ರಾಂತಿ ಹಬ್ಬ ಹರ್ಷ, ಸಂತೋಷ, ಮತ್ತು ಹೊಸ ಬೆಳಕನ್ನು ತರಲಿ. ಸಂಕ್ರಾಂತಿ ಹಬ್ಬದ ಶುಭಾಶಯಗಳು ***


*** ಸುರ್ಯನ ಬೆಳಕು ನಿಮ್ಮ ಜೀವನದಲ್ಲಿ ಹಾಸುಹೊಕ್ಕಾಗಿಸಲಿ ಮತ್ತು ಪ್ರೀತಿ, ಶಾಂತಿ, ಯಶಸ್ಸು ಸದಾ ತುಂಬಿರಲಿ ***


*** ಈ ಸಂಕ್ರಾಂತಿ ನಿಮ್ಮ ಜೀವನದ ಪ್ರತಿ ಭಾಗವನ್ನು ಸಿಹಿಯಾದ ಕ್ಷಣಗಳಿಂದ ತುಂಬಲಿ ***


*** ನಿಮ್ಮ ಜೀವನ ಹೊಸ ಪ್ರಾರಂಭಗಳ ಸಾಕ್ಷಿಯಾಗಲಿ. ಸಂಕ್ರಾಂತಿ ಹಾರ್ದಿಕ ಶುಭಾಶಯಗಳು! ***


*** ಈ ಸಂಕ್ರಾಂತಿ ಹಬ್ಬವು ನಿಮ್ಮ ಕುಟುಂಬಕ್ಕೆ ಸಮೃದ್ಧಿ, ಆರೋಗ್ಯ, ಮತ್ತು ಶ್ರೇಯಸ್ಸನ್ನು ನೀಡಲಿ ***


*** ಸೂರ್ಯನ ಶಕ್ತಿ ನಿಮ್ಮ ಹೃದಯವನ್ನು ಪ್ರಜ್ವಲಿಸಲಿ, ಸಂತೋಷ ಮತ್ತು ಶಾಂತಿ ಸದಾ ತುಂಬಿರಲಿ. ಸಂಕ್ರಾಂತಿ ಹಾರ್ದಿಕ ಶುಭಾಶಯಗಳು! ***


*** ಈ ಸಂಕ್ರಾಂತಿ, ನಿಮ್ಮ ಮನೆಗೆ ಬೆಳಕು, ನಿಮ್ಮ ಮನಸ್ಸಿನಲ್ಲಿ ಪ್ರೀತಿ ಮತ್ತು ಜೀವನಕ್ಕೆ ಸಮೃದ್ಧಿ ತರಲಿ. ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು! ***


*** ನೀವು ನೀಡುವ ಪ್ರೀತಿ ಮತ್ತು ಬೆಂಬಲ ಸಂಕ್ರಾಂತಿ ಹಬ್ಬವನ್ನು ಮತ್ತಷ್ಟು ಸಿಹಿಗೊಳಿಸಿದೆ. ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು! ***


*** ನಿಮ್ಮ ಹೃದಯದಲ್ಲಿ ಶಾಂತಿ ತುಂಬಲಿ ಮತ್ತು ನಿಮ್ಮ ಬಾಳು ಶ್ರೇಯಸ್ಕರಗೊಳ್ಳಲಿ. ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು! ***


Happy Sankranti 2026 GIF Kannada download

ಕೊನೆ ಮಾತು

ಈ ಲೇಖನದಲ್ಲಿ ಪಟ್ಟಿ ಮಾಡಿರುವ ಸಂಕ್ರಾಂತಿ ಹಬ್ಬದ ಶುಭಾಶಯಗಳು ನಿಮಗೆ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ. ಇಷ್ಟವಾದಲ್ಲಿ, ಈ ಲೇಖನವನ್ನು ಇತರರಿಗೆ ಹಂಚಬೇಕಾಗಿ ವಿನಂತಿ. ಈ ಲೇಖನದ ಬಗ್ಗೆ ಸಲಹೆ ಮತ್ತು ಅಭಿಪ್ರಾಯಗಳನ್ನು ನನ್ನ ಇಮೇಲ್ id ಗೆ ಕಳುಹಿಸಿಕೊಡಿ. ನನ್ನ ಇಮೇಲ್ id ‘CoolHomeTechPraveen@gmail.com

ಧನ್ಯವಾದಗಳು 🙂
ಪ್ರವೀಣ್ ಕುಮಾರ್