100+ Happy Birthday Wishes in Kannada (2025) | ಹುಟ್ಟು ಹಬ್ಬದ ಶುಭಾಶಯಗಳು

Looking for the best Birthday Wishes in Kannada? Explore 100+ heart-touching, funny & creative wishes for friends & family. Updated for 2025 with Images. Copy and paste now!

Looking for the best Birthday Wishes in Kannada? In this post, we have curated 100+ Huttu Habba Shubhashayagalu for every relationship. Whether you need emotional wishes for Parents (ತಂದೆ-ತಾಯಿ), funny quotes for Best Friends (ಸ್ನೇಹಿತರು), or sweet messages for your Brother and Sister (ಅಣ್ಣ-ತಂಗಿ), you will find them all here. You can also download unique images for your WhatsApp Status.

ಹುಟ್ಟು ಹಬ್ಬ ದಿನ ಎಲ್ಲರ ಬಾಳಲ್ಲೂ ಒಂದು ತರ ವಿಶೇಷ ದಿನ ಅನ್ನಬಹುದು. ಈ ದಿನ ತಿಳಿಸಿದ ಸಂದೇಶಗಳು ಒಬ್ಬರ ಜೀವನ ಪರ್ಯಂತ ನೆನಪಿನಲ್ಲಿ ಉಳಿಯುತ್ತದೆ. ಈ ಲೇಖನದಲ್ಲಿ ನಿಮ್ಮ ಭಾವನೆಯನ್ನು ವ್ಯಕ್ತಪಡಿಸಲು 100+ Birthday Wishes in Kannada | ಜನ್ಮ ದಿನದ ಶುಭಾಶಯಗಳು । ಹುಟ್ಟು ಹಬ್ಬದ ಶುಭಾಶಯಗಳನ್ನು ಪಟ್ಟಿ ಮಾಡಿದ್ದೇನೆ. ಇವನ್ನು ಈಗ ಒಂದೊಂದಾಗಿ ನೋಡೋಣ.

ಪ್ರತಿಯೊಂದು ವ್ಯಕ್ತಿಗೆ ಅವನ ಅಥವಾ ಅವಳ ಮಾತೃ ಭಾಷೆಯಲ್ಲಿ ಸಂದೇಶ ಕಳುಹಿಸಿದಾಗ ಅದು ಬಹಳ ಹೃದಯಸ್ಪರ್ಶಿ ಅನ್ನಿಸುತ್ತದೆ. ಹೀಗಿರುವಾಗ, ನಿಮಗೆ ಇಷ್ಟವಾದ ಸಂದೇಶವನ್ನು ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸಿ ಅವರ ಸಂತೋಷ ಮತ್ತು ಪ್ರೀತಿಯ ಭಾಗವಾಗಿ.


Happy Birthday Wishes in Kannada with background image for WhatsApp Status

ಸ್ನೇಹಿತರು ಎಂದರೆ ದೇವರು ನಮಗೆ ನೀಡಿದ ವರ. ರಕ್ತ ಸಂಬಂಧಕ್ಕಿಂತ ಮಿಗಿಲಾದ ಸಂಬಂಧ ಸ್ನೇಹ. ನಿಮ್ಮ ಅಂತಹ ಆತ್ಮೀಯ ಸ್ನೇಹಿತರಿಗೆ ಅಥವಾ ಬೆಸ್ಟ್ ಫ್ರೆಂಡ್‌ಗೆ (Best Friend) ಕಳುಹಿಸಲು ಇಲ್ಲಿ ಸುಂದರವಾದ ಶುಭಾಶಯಗಳಿವೆ. ಇವುಗಳನ್ನು ಶೇರ್ ಮಾಡುವ ಮೂಲಕ ನಿಮ್ಮ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಿ.

ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಜೊತೆಯಾಗಿ ನಿಲ್ಲುವ ನನ್ನ ಪ್ರಿಯ ಮಿತ್ರನಿಗೆ ಜನ್ಮದಿನದ ಶುಭಾಶಯಗಳು.

ಸ್ನೇಹಕ್ಕೆ ಇನ್ನೊಂದು ಹೆಸರಾಗಿರುವ ನಿನಗೆ ಜನ್ಮದಿನದ ಶುಭಾಶಯಗಳು.

ರಕ್ತಸಂಬಂಧ ಇಲ್ಲದಿದ್ದರೂ, ಅದಕ್ಕಿಂತ ಮಿಗಿಲಾದ ಬಾಂಧವ್ಯ ನಮ್ಮದು. ಕೇವಲ ಸ್ನೇಹಿತನಾಗಿರದೆ ಸಹೋದರನಂತೆ ನನ್ನನ್ನು ನೋಡಿಕೊಳ್ಳುವ ನಿನಗೆ ಹುಟ್ಟುಹಬ್ಬದ ವಿಶೇಷ ಶುಭಾಶಯಗಳು. ಲವ್ ಯೂ ಮಿತ್ರ.

ಪ್ರಪಂಚದಲ್ಲಿ ಎಷ್ಟೋ ಜನರಿದ್ದಾರೆ, ಆದರೆ ನಿನ್ನಂತಹ ಸ್ನೇಹಿತ ಸಿಕ್ಕಿದ್ದು ನನ್ನ ಅದೃಷ್ಟ. ಹ್ಯಾಪಿ ಬರ್ತ್ ಡೇ!

ನನ್ನ ಪ್ರೀತಿಯ ಸ್ನೇಹಿತನಿಗೆ/ಸ್ನೇಹಿತೆಗೆ ಹುಟ್ಟುಹಬ್ಬದ ಶುಭಾಶಯಗಳು. ನೀನು ಸದಾ ಹೀಗೆ ನಗುತ್ತಿರು!

ನನ್ನ ಜೀವನದ ಪ್ರತಿಯೊಂದು ಕಷ್ಟ-ಸುಖಗಳಲ್ಲಿಯೂ ನನ್ನ ಬೆನ್ನೆಲುಬಾಗಿ ನಿಂತಿರುವ ನಿನಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಮ್ಮ ಈ ಸ್ನೇಹ ಬಂಧ ಹೀಗೆಯೇ ಶಾಶ್ವತವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ನನ್ನ ಕಷ್ಟ ಸುಖಗಳೆಲ್ಲದರಲ್ಲೂ ಭಾಗಿಯಾಗುವ ನನ್ನ ಬೆಸ್ಟ್ ಫ್ರೆಂಡ್‌ಗೆ ಹುಟ್ಟುಹಬ್ಬದ ಶುಭಾಶಯಗಳು.

ಸ್ನೇಹಕ್ಕೆ ಇನ್ನೊಂದು ಹೆಸರಾಗಿರುವ ನಿನಗೆ ಜನ್ಮದಿನದ ಶುಭಾಶಯಗಳು.

ಈ ಹುಟ್ಟುಹಬ್ಬವು ನಿನ್ನ ಜೀವನದಲ್ಲಿ ಹೊಸ ಭರವಸೆ ಮತ್ತು ಯಶಸ್ಸಿನ ಬಾಗಿಲನ್ನು ತೆರೆಯಲಿ. ನೀನು ಕಂಡ ಎಲ್ಲಾ ಕನಸುಗಳು ಶೀಘ್ರದಲ್ಲೇ ನನಸಾಗಲಿ ಎಂದು ಹಾರೈಸುತ್ತಾ, ನಿನಗೆ ಜನ್ಮದಿನದ ಶುಭಾಶಯಗಳು!

ನೂರು ಕಾಲ ಸುಖವಾಗಿ ಬಾಳು ಗೆಳೆಯ/ಗೆಳತಿ. ದೇವರು ನಿನಗೆ ಒಳ್ಳೆಯದನ್ನು ಮಾಡಲಿ.

ವಯಸ್ಸು ಆಗ್ತಿದೆ ಅಂತ ಬೇಜಾರ್ ಮಾಡ್ಕೋಬೇಡ, ನಾವು ಯಾವತ್ತಿದ್ರೂ “ಯಂಗ್ ಅಂಡ್ ಎನರ್ಜಿಟಿಕ್”! ಹುಟ್ಟುಹಬ್ಬದ ಶುಭಾಶಯಗಳು.

ನಿನ್ನ ಮುಖದಲ್ಲಿರುವ ಈ ನಗು ಯಾವತ್ತೂ ಮಾಸದಿರಲಿ. ದೇವರು ನಿನಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಕರುಣಿಸಲಿ. ಬಾ ಮಚಾ, ಇವತ್ತು ನಿನ್ನ ದಿನ, ಇದನ್ನು ಜೋರಾಗಿ ಆಚರಿಸೋಣ! ಹ್ಯಾಪಿ ಬರ್ತ್ ಡೇ.

ನನ್ನ ಎಲ್ಲಾ ತರಲೆಗಳಿಗೂ ಸಾಥ್ ನೀಡುವ ನನ್ನ ಕ್ರೈಮ್ ಪಾರ್ಟ್ನರ್‌ಗೆ ಹುಟ್ಟುಹಬ್ಬದ ಶುಭಾಶಯಗಳು!

ಈ ವರ್ಷ ನಿನಗೆ ಅಂದುಕೊಂಡಿದ್ದೆಲ್ಲಾ ಸಿಗಲಿ ಮಗನೇ. ಹ್ಯಾಪಿ ಬರ್ತ್ ಡೇ!

ಜಗತ್ತಿನಲ್ಲಿ ಎಷ್ಟೋ ಜನರಿದ್ದಾರೆ, ಆದರೆ ನಿನ್ನಂತಹ ಶುದ್ಧ ಮನಸ್ಸಿನ ವ್ಯಕ್ತಿ ಸಿಗುವುದು ತುಂಬಾ ಕಷ್ಟ. ನಿನ್ನ ಬಾಳು ಸದಾ ಹೂವಿನಂತೆ ಅರಳಿರಲಿ. ನಿನಗೆ ಮತ್ತು ನಿನ್ನ ಕುಟುಂಬಕ್ಕೆ ಹುಟ್ಟುಹಬ್ಬದ ಶುಭಾಶಯಗಳು.

ಹ್ಯಾಪಿ ಬರ್ತ್ ಡೇ ಮಚಾ! ಪಾರ್ಟಿ ಯಾವಾಗ ಅಂತ ಮರಿಬೇಡ!

Happy Birthday Wishes in Kannada with background image for WhatsApp Status

ಜಗತ್ತಿನಲ್ಲಿ ನಿಸ್ವಾರ್ಥ ಪ್ರೀತಿ ಸಿಗುವುದು ತಂದೆ-ತಾಯಿಯಿಂದ ಮಾತ್ರ. ನಮ್ಮ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಡುವ ಅವರಿಗೆ ಹುಟ್ಟುಹಬ್ಬದಂದು ಶುಭ ಕೋರುವುದು ನಮ್ಮ ಕರ್ತವ್ಯ. ಇಲ್ಲಿ ಅಪ್ಪ ಮತ್ತು ಅಮ್ಮನಿಗಾಗಿ ಹೃದಯಸ್ಪರ್ಶಿ ಹುಟ್ಟುಹಬ್ಬದ ಶುಭಾಶಯಗಳನ್ನು ನೀಡಲಾಗಿದೆ. ಇವುಗಳ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ.

ತನ್ನ ಸಂತೋಷವನ್ನೇ ತ್ಯಾಗ ಮಾಡಿ, ನಮಗಾಗಿ ಬದುಕುವ ಪ್ರೀತಿಯ ಅಮ್ಮನಿಗೆ ಜನ್ಮದಿನದ ಶುಭಾಶಯಗಳು.

ತನ್ನ ಸಂತೋಷವನ್ನೇ ತ್ಯಾಗ ಮಾಡಿ, ನಮಗಾಗಿ ಬದುಕುವ, ಮಮತೆಯ ಸ್ವರೂಪವಾಗಿರುವ ನನ್ನ ಪ್ರೀತಿಯ ಅಮ್ಮನಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ನನ್ನ ಬಾಳಿಗೆ ಬೆಳಕಾಗಿ, ದಾರಿದೀಪವಾಗಿ ನಿಂತಿರುವ ನನ್ನ ಪ್ರೀತಿಯ ಅಪ್ಪನಿಗೆ ಹುಟ್ಟುಹಬ್ಬದ ಶುಭಾಶಯಗಳು.

ಜಗತ್ತಿಗೆ ನೀವು ಕೇವಲ ಒಬ್ಬ ವ್ಯಕ್ತಿಯಾಗಿರಬಹುದು, ಆದರೆ ನನಗೆ ನೀವೇ ಪ್ರಪಂಚ. ಲವ್ ಯೂ ಅಪ್ಪ/ಅಮ್ಮ.

ದೇವರನ್ನು ನಾನು ನೋಡಿಲ್ಲ, ಆದರೆ ನಿಮ್ಮ ರೂಪದಲ್ಲಿ ದೇವರನ್ನು ಕಾಣುತ್ತಿದ್ದೇನೆ. ಹುಟ್ಟುಹಬ್ಬದ ಶುಭಾಶಯಗಳು.

ದೇವರನ್ನು ನಾನು ನೋಡಿಲ್ಲ, ಆದರೆ ನಿಮ್ಮ ರೂಪದಲ್ಲಿ ನಾನು ಪ್ರತಿದಿನ ದೇವರನ್ನು ಕಾಣುತ್ತಿದ್ದೇನೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ. ಹುಟ್ಟುಹಬ್ಬದ ಶುಭಾಶಯಗಳು.

ನನ್ನ ಮೊದಲ ಗುರು, ನನ್ನ ಮೊದಲ ಸ್ನೇಹಿತ/ಸ್ನೇಹಿತೆ ಆಗಿರುವ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು.

ನನ್ನ ಏಳಿಗೆಯ ಹಿಂದಿರುವ ಶಕ್ತಿ ನೀವು. ದೇವರು ನಿಮಗೆ ದೀರ್ಘಾಯುಷ್ಯ ನೀಡಲಿ. ಹ್ಯಾಪಿ ಬರ್ತ್ ಡೇ ಅಪ್ಪ.

ಜಗತ್ತಿಗೆ ನೀವು ಕೇವಲ ಒಬ್ಬ ವ್ಯಕ್ತಿಯಾಗಿರಬಹುದು, ಆದರೆ ನನಗೆ ನೀವೇ ಪ್ರಪಂಚ. ನಿಮ್ಮ ಮಗುವಾಗಿ ಹುಟ್ಟಿದ್ದೇ ನನ್ನ ಭಾಗ್ಯ. ಲವ್ ಯೂ ಅಪ್ಪ/ಅಮ್ಮ.

ನನ್ನ ಕಣ್ಣೀರು ಒರೆಸಿ, ಧೈರ್ಯ ತುಂಬುವ ನನ್ನ ಮುದ್ದು ಅಮ್ಮನಿಗೆ ಜನ್ಮದಿನದ ಶುಭಾಶಯಗಳು.

ನನ್ನ ಜೀವನದ ಸೂಪರ್ ಹೀರೋಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಮುಂದಿನ ಏಳು ಜನ್ಮದಲ್ಲೂ ನೀವೇ ನನ್ನ ತಂದೆ-ತಾಯಿಯಾಗಿ ಸಿಗಲಿ, ನಿಮ್ಮ ಸೇವೆ ಮಾಡುವ ಭಾಗ್ಯ ನನಗೆ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು.

ನಿಮ್ಮ ತ್ಯಾಗ ಮತ್ತು ಪ್ರೀತಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಸದಾ ನಿಮ್ಮ ಮಗುವಾಗಿರುವ ನಾನು ಹಾರೈಸುವ ಶುಭಾಶಯಗಳು.

ನನ್ನ ಬಾಳಿಗೆ ಬೆಳಕಾಗಿ, ದಾರಿದೀಪವಾಗಿ ನಿಂತಿರುವ ಹಾಗೂ ಕಷ್ಟದ ಸಮಯದಲ್ಲಿ ಧೈರ್ಯ ತುಂಬುವ ನನ್ನ ಪ್ರೀತಿಯ ಅಪ್ಪನಿಗೆ ಹುಟ್ಟುಹಬ್ಬದ ಶುಭಾಶಯಗಳು.

ಬಿಸಿಲು ಮಳೆ ಎನ್ನದೆ ನಮಗಾಗಿ ದುಡಿದು, ನಮ್ಮ ಕನಸುಗಳನ್ನೇ ನಿಮ್ಮ ಕನಸಾಗಿಸಿಕೊಂಡಿರುವ ನಿಮಗೆ ಸದಾ ಚಿರಋಣಿಯಾಗಿರುತ್ತೇನೆ. ದೇವರು ನಿಮಗೆ ದೀರ್ಘಾಯುಷ್ಯ ನೀಡಲಿ.

Happy Birthday Wishes in Kannada with background image for WhatsApp Status

ಹುಟ್ಟುಹಬ್ಬದ ಸಂಭ್ರಮ ಕೇವಲ ಕೇಕ್ ಕಟ್ ಮಾಡುವುದು ಅಥವಾ ಭಾವನಾತ್ಮಕ ಮಾತುಗಳಿಗೆ ಸೀಮಿತವಾಗಿರಬೇಕಿಲ್ಲ. ನಮ್ಮ ಅತಿ ಆಪ್ತರು ಅಥವಾ ಪ್ರೀತಿಯ ಸ್ನೇಹಿತರಿಗೆ ವಿಶ್ ಮಾಡುವಾಗ ಸ್ವಲ್ಪ ತಮಾಷೆ, ತರಲೆ ಇದ್ದರೆನೇ ಮಜಾ! ಇಲ್ಲಿ ನಾವು ನಿಮಗಾಗಿ Funny Birthday Wishes in Kannada (ತಮಾಷೆಯ ಹುಟ್ಟುಹಬ್ಬದ ಶುಭಾಶಯಗಳು) ಸಂಗ್ರಹವನ್ನು ನೀಡಿದ್ದೇವೆ. ಇವುಗಳನ್ನು ಕಳುಹಿಸಿ ಅವರ ಮುಖದಲ್ಲಿ ನಗು ಮೂಡಿಸಿ!

ಕೇಕ್ ಕಟ್ ಮಾಡೋದು ಇರ್ಲಿ, ಪಾರ್ಟಿ ಎಲ್ಲಿ ಅಂತ ಹೇಳು ಮೊದಲು! ಹ್ಯಾಪಿ ಬರ್ತ್ ಡೇ!

ವಯಸ್ಸು ಜಾಸ್ತಿ ಆಯ್ತು ಅಂತ ಚಿಂತೆ ಮಾಡ್ಬೇಡ, ಬುದ್ದಿ ಹೇಗಿದ್ರೂ ಇನ್ನೂ ಬಂದಿಲ್ಲ! ಹುಟ್ಟುಹಬ್ಬದ ಶುಭಾಶಯಗಳು.

ಹ್ಯಾಪಿ ಬರ್ತ್ ಡೇ! ಉಡುಗೊರೆ ತರಲು ಮರೆತು ಹೋದೆ, ಸದ್ಯಕ್ಕೆ ನನ್ನ ಪ್ರೀತಿಯನ್ನೇ ಇಟ್ಕೋ!

ಭೂಮಿಗೆ ಭಾರ ಆಗಿರೋ ಮತ್ತೊಬ್ಬ ಪ್ರಾಣಿಗೆ ಹುಟ್ಟುಹಬ್ಬದ ಶುಭಾಶಯಗಳು! (Just Kidding!)

ದೇವರು ನಿನಗೆ ಇನ್ನು ಹೆಚ್ಚು ಹಲ್ಲುಗಳನ್ನು ಕೊಡಲಿ, ಏಕೆಂದರೆ ನಿನಗೆ ತಿನ್ನೋದು ತುಂಬಾ ಇಷ್ಟ!

ನಿನಗೆ ವಯಸ್ಸಾಗ್ತಿದೆ ಅಂತ ಫೀಲ್ ಆದ್ರೆ ಪರವಾಗಿಲ್ಲ, ಕನ್ನಡಿ ನೋಡಬೇಡ ಅಷ್ಟೇ! ಜನ್ಮದಿನದ ಶುಭಾಶಯಗಳು.

ನಿನ್ನ ಸೀಕ್ರೆಟ್ ವಯಸ್ಸು ನನಗೆ ಮಾತ್ರ ಗೊತ್ತು, ಯಾರಿಗೂ ಹೇಳಲ್ಲ ಬಿಡು! ಹ್ಯಾಪಿ ಬರ್ತ್ ಡೇ.

ಕೇಕ್ ತಿನ್ನೋ ಆಸೆಗೆ ಬರ್ತ್ ಡೇ ವಿಶ್ ಮಾಡ್ತಿದೀನಿ ಕಣೋ/ಕಣೆ. ಬೇಗ ಪಾರ್ಟಿ ಕೊಡು!

ನನ್ನ ಸ್ಮಾರ್ಟ್ ಫ್ರೆಂಡ್ (ಅದು ನಾನು) ನಿನಗೆ ವಿಶ್ ಮಾಡ್ತಿದ್ದಾನೆ/ಳೆ. ಖುಷಿ ಪಡು!

ತಲೆ ಕೂದಲು ಬೆಳ್ಳಗಾದ್ರೂ ಮನಸ್ಸು ಇನ್ನೂ ಮಗುನೇ! ಹ್ಯಾಪಿ ಬರ್ತ್ ಡೇ ಮುದುಕ/ಮುದುಕಿ!

ಹ್ಯಾಪಿ ಬರ್ತ್ ಡೇ! ನಿನಗೊಂದು ಗಿಫ್ಟ್ ಕೊಡೋಣ ಅಂತಿದ್ದೆ, ಆದ್ರೆ ನನ್ನಂತಹ ಫ್ರೆಂಡ್ ಸಿಕ್ಕಿರೋದೇ ನಿನಗೆ ದೊಡ್ಡ ಗಿಫ್ಟ್ ಅಲ್ವಾ? ಎಂಜಾಯ್ ಮಾಡು!

ನಿನ್ನ ಬರ್ತ್ ಡೇ ಕೇಕ್ ಮೇಲೆ ಎಷ್ಟು ಮೇಣದಬತ್ತಿ ಇಡಬೇಕು ಅಂದ್ರೆ, ಅದನ್ನ ಆರಿಸೋಕೆ ಅಗ್ನಿಶಾಮಕ ದಳನೇ ಕರೀಬೇಕು ಅನ್ಸುತ್ತೆ! ಹ್ಯಾಪಿ ಬರ್ತ್ ಡೇ ಮುದುಕ/ಮುದುಕಿ!

ಈ ವರ್ಷವಾದ್ರೂ ದೇವರು ನಿನಗೆ ಸ್ವಲ್ಪ ಬುದ್ಧಿ ಕೊಡಲಿ ಅಂತ ಪ್ರಾರ್ಥಿಸ್ತೀನಿ. ಜನ್ಮದಿನದ ಶುಭಾಶಯಗಳು!

ನಾನು ಬಂದಿರೋದು ನಿನ್ನ ನೋಡೋಕೆ ಅಲ್ಲ, ಕೇಕ್ ತಿನ್ನೋಕೆ! ಬೇಗ ಕೇಕ್ ಕಟ್ ಮಾಡು. ಹ್ಯಾಪಿ ಬರ್ತ್ ಡೇ!

ನಿನ್ನ ವಯಸ್ಸು ಎಷ್ಟಾಯ್ತು ಅಂತ ಯಾರಿಗೂ ಹೇಳಲ್ಲ ಬಿಡು, ಆದ್ರೆ ಪಾರ್ಟಿ ಮಾತ್ರ ಗ್ರಾಂಡ್ ಆಗಿರಲಿ! ಹುಟ್ಟುಹಬ್ಬದ ಶುಭಾಶಯಗಳು.

Happy Birthday Wishes in Kannada with background image for WhatsApp Status

ಕೆಲಸದ ಒತ್ತಡ ಅಥವಾ ಮರೆವಿನಿಂದಾಗಿ ನಮ್ಮ ಆಪ್ತರ ಹುಟ್ಟುಹಬ್ಬವನ್ನು ವಿಶ್ ಮಾಡಲು ಕೆಲವೊಮ್ಮೆ ತಡವಾಗಬಹುದು. ಅಂತಹ ಸಮಯದಲ್ಲಿ, ಸುಮ್ಮನೆ ಇರುವುದಕ್ಕಿಂತ ತಡವಾಗಿಯಾದರೂ ವಿಶ್ ಮಾಡುವುದು ಉತ್ತಮ. “Belated Birthday Wishes” ಮೂಲಕ ಅವರಿಗೆ ಬೇಜಾರಾಗದಂತೆ, ಪ್ರೀತಿಯಿಂದ ವಿಶ್ ಮಾಡಲು ಇಲ್ಲಿ ಕೆಲವು ಆಯ್ಕೆಗಳಿವೆ.

ಹುಟ್ಟುಹಬ್ಬದ ಶುಭಾಶಯ ತಿಳಿಸಲು ಸ್ವಲ್ಪ ತಡವಾಯಿತು, ಕ್ಷಮಿಸಿ. ಬೆಲೇಟೆಡ್ ಹ್ಯಾಪಿ ಬರ್ತ್ ಡೇ!

ದಿನಾಂಕ ಮರೆತು ಹೋಗಿರಬಹುದು, ಆದರೆ ನಿಮ್ಮ ಮೇಲಿನ ಸ್ನೇಹ ಮರೆತಿಲ್ಲ. ತಡವಾದ ಹುಟ್ಟುಹಬ್ಬದ ಶುಭಾಶಯಗಳು.

ಕೆಲಸದ ಒತ್ತಡದಲ್ಲಿ ದಿನಾಂಕ ನೋಡಲಿಲ್ಲ. ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ಜನ್ಮದಿನದ ಶುಭಾಶಯಗಳು.

ನಿನ್ನ ಹುಟ್ಟುಹಬ್ಬ ಮುಗಿದಿರಬಹುದು, ಆದರೆ ಪಾರ್ಟಿ ಇನ್ನೂ ಬಾಕಿ ಇದೆ ಅಲ್ವಾ? Belated Happy Birthday!

ಉತ್ತಮ ವಿಷಯಗಳು ಯಾವಾಗಲೂ ತಡವಾಗಿ ಬರುತ್ತವೆ. ಹಾಗೆಯೇ ನನ್ನ ಶುಭಾಶಯ ಕೂಡ! ಹ್ಯಾಪಿ ಬರ್ತ್ ಡೇ!

ನಾನು ಬೇಕಂತಲೇ ತಡವಾಗಿ ವಿಶ್ ಮಾಡುತ್ತಿದ್ದೇನೆ, ಯಾಕಂದ್ರೆ ನಿನಗೆ ಸರ್ಪ್ರೈಸ್ ಕೊಡೋಕೆ! (ಸುಳ್ಳು ಅನ್ಬೇಡ!).

ಸಮಯಕ್ಕೆ ಸರಿಯಾಗಿ ವಿಶ್ ಮಾಡಲಾಗದಿದ್ದಕ್ಕೆ ಕ್ಷಮೆ ಇರಲಿ. ದೇವರು ನಿನಗೆ ಒಳ್ಳೆಯದು ಮಾಡಲಿ.

ನನ್ನ ಹಾರೈಕೆ ತಡವಾಗಿರಬಹುದು, ಆದರೆ ಅದು ಎಂದಿಗೂ ನಿಜವಾಗಿರುತ್ತದೆ. Belated Happy Birthday.

ನಿನ್ನೆ ನಿನಗೆ ತುಂಬಾ ಜನ ವಿಶ್ ಮಾಡಿದ್ದಾರೆ, ಇವತ್ತು ನಾನು ಮಾತ್ರ ವಿಶ್ ಮಾಡ್ತಿದೀನಿ. ನಾನು ಸ್ಪೆಷಲ್ ಅಲ್ವಾ?

ಕ್ಯಾಲೆಂಡರ್ ನೋಡೋದು ಮರೆತು ಹೋಯ್ತು, ಆದ್ರೆ ನಿನ್ನ ಮರೆತಿಲ್ಲ. ತಡವಾದ ಹುಟ್ಟುಹಬ್ಬದ ಶುಭಾಶಯಗಳು.

ನಿನ್ನ ಹುಟ್ಟುಹಬ್ಬ ಮುಗೀತು ಅಂತ ಬೇಜಾರ್ ಮಾಡ್ಕೋಬೇಡ, ನನ್ನ ವಿಶ್ ಮೂಲಕ ಸಂಭ್ರಮವನ್ನ ಇವತ್ತು ಕೂಡ ಕಂಟಿನ್ಯೂ ಮಾಡೋಣ! Belated Happy Birthday.

ನನ್ನ ವಿಶ್ ಸ್ವಲ್ಪ ತಡವಾಗಿರಬಹುದು, ಆದ್ರೆ ಅದರಲ್ಲಿರೋ ಪ್ರೀತಿ ಮಾತ್ರ ಯಾವಾಗಲೂ ಫ್ರೆಶ್ ಆಗಿರುತ್ತೆ! ತಡವಾದ ಹುಟ್ಟುಹಬ್ಬದ ಶುಭಾಶಯಗಳು.

ನಿನಗೆ ಗೊತ್ತಲ್ಲ, ನಾನು ಯಾವಾಗಲೂ “ಲೇಟ್ ಎಂಟ್ರಿ” ಕೊಡೋ ಸ್ಟಾರ್! ಅದಕ್ಕೆ ವಿಶ್ ಕೂಡ ಲೇಟ್. Belated Happy Birthday!

ಎಲ್ಲರೂ ನಿನ್ನ ಬರ್ತ್ ಡೇ ದಿನ ವಿಶ್ ಮಾಡಿದ್ರೆ, ನಾನು ಮಾತ್ರ ಬರ್ತ್ ಡೇ ಮುಗಿದ ಮೇಲೂ ನೆನಪಿಸಿಕೊಳ್ತಿದ್ದೀನಿ. ಇದಕ್ಕೇ ಅಲ್ವಾ ಫ್ರೆಂಡ್ಸ್ ಅನ್ನೋದು!

ಸಮಯ ಎಷ್ಟೇ ಕಳೆದರೂ, ಒಳ್ಳೆಯ ಹಾರೈಕೆಗಳಿಗೆ ಎಂದಿಗೂ ಕೊನೆಯಿಲ್ಲ. ದೇವರು ನಿನಗೆ ಸದಾ ಒಳ್ಳೆಯದನ್ನೇ ಮಾಡಲಿ.

Happy Birthday Wishes in Kannada with background image for WhatsApp Status

ಹುಟ್ಟುಹಬ್ಬವು ನಿಮ್ಮ ಸಂಗಾತಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಸಿಗುವ ಅತ್ಯುತ್ತಮ ಅವಕಾಶ. ಬರೀ ಉಡುಗೊರೆಗಳಲ್ಲದೆ, ಪ್ರೀತಿ ತುಂಬಿದ ಮಾತುಗಳು ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ನಿಮ್ಮ ಪತಿ, ಪತ್ನಿಗೆ ಕಳುಹಿಸಲು ಇಲ್ಲಿ ರೋಮ್ಯಾಂಟಿಕ್ (Romantic) ಶುಭಾಶಯಗಳಿವೆ.

ನೀವು ನನ್ನ ಪ್ರಪಂಚ, ನನ್ನ ಪ್ರೀತಿಯ ಸರ್ವಶ್ರೇಷ್ಠ ಸಂಗಾತಿ. ಜನ್ಮದಿನದ ಶುಭಾಶಯಗಳು!

ನೀನು ನನ್ನ ಜೀವನದ ಅಡಿಗಲ್ಲು! ಹುಟ್ಟುಹಬ್ಬದ ಹಾರ್ಥಿಕ ಶುಭಾಶಯಗಳು.

ನಿನ್ನ ಪ್ರೀತಿ ಮತ್ತು ಬೆಂಬಲದಿಂದ ನನ್ನ ಜೀವನ ಪೂರ್ಣವಾಗುತ್ತದೆ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು!

ನಿನ್ನ ಜೊತೆಗಿನ ಪ್ರತಿಯೊಂದು ಕ್ಷಣವು ಒಂದು ಮಾಯಾದೃಶ್ಯ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು, ಪ್ರಿಯತಮ / ಪ್ರಿಯತಮೆ!

ನೀವು ನನ್ನ ಹೃದಯದ ಪ್ರತಿ ಭಾಗವನ್ನು ದೀಪದಿಂದ ಅಲಂಕರಿಸಿದ್ದೀರಿ. ಜನ್ಮದಿನದ ಶುಭಾಶಯಗಳು.

ನೀವು ನನ್ನ ಕನಸು, ಮತ್ತು ಇದು ನನ್ನ ಪ್ರತಿದಿನದ ಪ್ರೇರಣೆಯಾಗಿ ಇರಲಿ. ಹುಟ್ಟುಹಬ್ಬದ ಶುಭಾಶಯಗಳು!

ನೀವು ನನ್ನ ಈ ಪ್ರಪಂಚವನ್ನು ಮಧುರಗೊಳಿಸಿದ್ದೀರಿ. ಪ್ರೀತಿಯಿಂದ ತುಂಬಿದ ಹುಟ್ಟುಹಬ್ಬದ ಶುಭಾಶಯಗಳು!

Happy Birthday Wishes in Kannada with background image for WhatsApp Status

ವಾಟ್ಸಾಪ್ ಸ್ಟೇಟಸ್ (WhatsApp Status) ಅಥವಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಲು ಇಲ್ಲಿ ಚಿಕ್ಕದಾದ ಮತ್ತು ಅರ್ಥಪೂರ್ಣವಾದ ಹುಟ್ಟುಹಬ್ಬದ ಶುಭಾಶಯಗಳಿವೆ. ಇವು ಸರಳವಾಗಿದ್ದರೂ, ಓದುಗರ ಮನಸ್ಸಿಗೆ ಹತ್ತಿರವಾಗುತ್ತವೆ. ಇವುಗಳನ್ನು ನೀವು ನಿಮ್ಮ ಸ್ನೇಹಿತರು, ಕುಟುಂಬದವರು ಅಥವಾ ಸಹೋದ್ಯೋಗಿಗಳಿಗೆ ಕಳುಹಿಸಬಹುದು.

ನಿಮ್ಮ ಜೀವನದ ಹಾದಿ ಸ್ಫೂರ್ತಿದಾಯಕ ಬೆಳಕಿನಿಂದ ಕಂಗೊಳಿಸಲಿ! ಹುಟ್ಟು ಹಬ್ಬದ ಹಾರ್ಥಿಕ ಶುಭಾಶಯಗಳು!

ಈ ದಿನದ ಹರ್ಷವು ನಿಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿ! ಜನ್ಮದಿನದ ಶುಭಾಶಯಗಳು!

ನಿಮ್ಮ ಕನಸುಗಳ ಬಾಗಿಲು ಇಂದು ತೆರೆಯಲಿ! ಜನ್ಮದಿನದ ಶುಭಾಶಯಗಳು!

ನಿಮ್ಮ ನಗು ಪ್ರತಿ ಹೃದಯವನ್ನು ಗೆಲ್ಲಲಿ! ಹುಟ್ಟು ಹಬ್ಬದ ಹಾರ್ಥಿಕ ಶುಭಾಶಯಗಳು!

ನಮ್ಮಿಬ್ಬರ ಪ್ರೀತಿಯ ಜೊತೆಗೆ ಈ ಸ್ವಚಂದ ಸ್ನೇಹವು ಸದಾ ಬೆಳಗಲಿ! ನಿಮಗೆ ಜನ್ಮದಿನದ ಶುಭಾಶಯಗಳು!

ದೇವರು ನಿಮಗೆ ಆಯುರಾರೋಗ್ಯ, ಐಶ್ವರ್ಯ ಕರುಣಿಸಲಿ. ಜನ್ಮದಿನದ ಹಾರ್ದಿಕ ಶುಭಾಶಯಗಳು.

ಈ ವಿಶೇಷ ದಿನವು ನಿಮ್ಮ ಬಾಳಿನಲ್ಲಿ ಹೊಸ ಉಲ್ಲಾಸ ತರಲಿ. ಹ್ಯಾಪಿ ಬರ್ತ್ ಡೇ!

ನಿಮ್ಮ ಮುಖದಲ್ಲಿನ ನಗು ಹೀಗೆಯೇ ಸದಾಕಾಲ ಇರಲಿ. ಹುಟ್ಟುಹಬ್ಬದ ಶುಭಾಶಯಗಳು.

ನೀವು ಅಂದುಕೊಂಡ ಕಾರ್ಯಗಳೆಲ್ಲವೂ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಶುಭ ಜನ್ಮದಿನ!

ದೇವರು ನಿಮಗೆ ಸದಾ ಒಳ್ಳೆಯದನ್ನೇ ಮಾಡಲಿ. ಜನ್ಮದಿನದ ಶುಭಾಶಯಗಳು.

ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಬೇಕೇ?

ಸುಲಭವಾಗಿ ಕನ್ನಡ ಪದಗಳನ್ನು ಇಂಗ್ಲಿಷ್‌ಗೆ ಬದಲಾಯಿಸಲು ನಮ್ಮ ಉಚಿತ ಟೂಲ್ (Tool) ಬಳಸಿ.

Use Kannada to English Translator »

Happy Birthday Wishes in Kannada with background image for WhatsApp Status

Birthday Wishes for Brother in Kannada (ಪ್ರೀತಿಯ ಸಹೋದರನಿಗೆ ಶುಭಾಶಯಗಳು)

ನಮ್ಮ ಬೆಂಬಲವಾಗಿ ನಿಲ್ಲುವ ಅಣ್ಣ ಅಥವಾ ಪ್ರೀತಿಯ ತಮ್ಮನಿಗಾಗಿ ಇಲ್ಲಿ ವಿಶೇಷವಾದ ಹುಟ್ಟುಹಬ್ಬದ ಶುಭಾಶಯಗಳಿವೆ. ಇವುಗಳನ್ನು ಕಳುಹಿಸಿ ಅವರ ದಿನವನ್ನು ವಿಶೇಷವಾಗಿಸಿ.

ನನ್ನ ರಕ್ಷಕ, ನನ್ನ ಮಾರ್ಗದರ್ಶಕ ಆಗಿರುವ ನನ್ನ ಪ್ರೀತಿಯ ಅಣ್ಣನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಜಗಳ ಎಷ್ಟೇ ಇದ್ದರೂ, ಕೊನೆಗೆ ನನ್ನ ಬೆಂಬಲಕ್ಕೆ ನಿಲ್ಲುವ ನನ್ನ ಮುದ್ದು ತಮ್ಮನಿಗೆ ಜನ್ಮದಿನದ ಶುಭಾಶಯಗಳು.

ದೇವರು ನಿನಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಕರುಣಿಸಲಿ. ಹ್ಯಾಪಿ ಬರ್ತ್ ಡೇ ಬ್ರದರ್!

ನನ್ನ ಬಾಲ್ಯದ ಗೆಳೆಯ ಮತ್ತು ಜೀವನದ ಹೀರೋ ಆಗಿರುವ ನಿನಗೆ ಹುಟ್ಟುಹಬ್ಬದ ಶುಭಾಶಯಗಳು.

ಜಗತ್ತಿಗೆ ನೀನು ಕೇವಲ ಒಬ್ಬ ವ್ಯಕ್ತಿ, ಆದರೆ ನನಗೆ ನೀನೇ ಪ್ರಪಂಚ. ಲವ್ ಯೂ ಅಣ್ಣ/ತಮ್ಮ.

ನಿನ್ನ ಮುಖದಲ್ಲಿನ ನಗು ಸದಾ ಹೀಗೆಯೇ ಇರಲಿ. ಕಷ್ಟಗಳು ನಿನ್ನಿಂದ ದೂರವಿರಲಿ. ಜನ್ಮದಿನದ ಶುಭಾಶಯಗಳು.

ನನ್ನ ಶಕ್ತಿ ಮತ್ತು ಧೈರ್ಯ ನೀನು. ನಿನ್ನ ಸಹೋದರನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಹ್ಯಾಪಿ ಬರ್ತ್ ಡೇ.

ಹುಟ್ಟುಹಬ್ಬದ ಶುಭಾಶಯಗಳು ಬ್ರದರ್! ಪಾರ್ಟಿ ಕೊಡಿಸೋದು ಮರೀಬೇಡ!

ನಿನ್ನ ಕನಸುಗಳೆಲ್ಲವೂ ಈ ವರ್ಷ ನನಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಶುಭ ಜನ್ಮದಿನ.

ಉತ್ತಮ ಸ್ನೇಹಿತ ಸಿಗುವುದು ಕಷ್ಟ, ಆದರೆ ಅಣ್ಣನ ರೂಪದಲ್ಲಿ ಸ್ನೇಹಿತ ಸಿಕ್ಕಿರುವುದು ನನ್ನ ಪುಣ್ಯ. ಹ್ಯಾಪಿ ಬರ್ತ್ ಡೇ.

Birthday Wishes for Sister in Kannada (ಪ್ರೀತಿಯ ಸಹೋದರಿಗೆ ಶುಭಾಶಯಗಳು)

ತಾಯಿಯ ನಂತರ ಪ್ರೀತಿ ತೋರಿಸುವ ಅಕ್ಕ ಅಥವಾ ಮನೆಯ ಮುದ್ದು ತಂಗಿಗೆ ಕಳುಹಿಸಲು ಇಲ್ಲಿ ಸುಂದರವಾದ ಶುಭಾಶಯಗಳಿವೆ.

ನನ್ನ ಪ್ರೀತಿಯ ಅಕ್ಕ/ತಂಗಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿನ್ನ ಬಾಳು ಸದಾ ಹೂವಿನಂತೆ ನಗುತ್ತಿರಲಿ.

ಅಮ್ಮನ ಮಮತೆ, ಅಪ್ಪನ ಕಾಳಜಿ ಎರಡೂ ನಿನ್ನಲ್ಲಿ ಕಾಣುತ್ತೇನೆ. ಹ್ಯಾಪಿ ಬರ್ತ್ ಡೇ ಅಕ್ಕ.

ಜಗಳ ಆಡೋಕೆ ನೀನೇ ಬೇಕು, ಕಷ್ಟ ಬಂದ್ರೆ ಸಮಾಧಾನ ಮಾಡೋಕೂ ನೀನೇ ಬೇಕು. ಹುಟ್ಟುಹಬ್ಬದ ಶುಭಾಶಯಗಳು.

ನನ್ನ ಎಲ್ಲಾ ಸೀಕ್ರೆಟ್ಸ್ ಗೊತ್ತಿರೋ ಪ್ರೀತಿಯ ತಂಗಿಗೆ ಜನ್ಮದಿನದ ಶುಭಾಶಯಗಳು. (ದಯವಿಟ್ಟು ಅಮ್ಮಂಗೆ ಹೇಳ್ಬೇಡ!).

ಸುಂದರವಾದ ಮನಸ್ಸಿರುವ ಸುಂದರವಾದ ಹುಡುಗಿಗೆ (ಅದು ನನ್ನ ತಂಗಿ) ಹುಟ್ಟುಹಬ್ಬದ ಶುಭಾಶಯಗಳು.

ದೇವರು ನಿನಗೆ ಉತ್ತಮ ಜೀವನ, ಆರೋಗ್ಯ ಮತ್ತು ಸಂತೋಷವನ್ನು ಕರುಣಿಸಲಿ. ಹ್ಯಾಪಿ ಬರ್ತ್ ಡೇ.

ನನ್ನ ಬೆಸ್ಟ್ ಫ್ರೆಂಡ್ ಮತ್ತು ಬೆಸ್ಟ್ ಸಿಸ್ಟರ್ ಆಗಿರುವ ನಿನಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಮನೆಯ ಲಕ್ಷ್ಮಿಯಂತಿರುವ ನಿನಗೆ ಹುಟ್ಟುಹಬ್ಬದ ಶುಭಾಶಯಗಳು. ಸದಾ ನಗುತ್ತಿರು.

ನನ್ನ ಜೀವನದ ಎಲ್ಲಾ ಕಷ್ಟಗಳನ್ನು ಹಂಚಿಕೊಳ್ಳುವ ನನ್ನ ಪ್ರೀತಿಯ ಅಕ್ಕನಿಗೆ ಧನ್ಯವಾದಗಳು. ಹುಟ್ಟುಹಬ್ಬದ ಶುಭಾಶಯಗಳು.

ನಿನ್ನಂತಹ ತಂಗಿ ಸಿಕ್ಕಿರೋದು ನನ್ನ ಅದೃಷ್ಟ. ಲವ್ ಯೂ! ಹ್ಯಾಪಿ ಬರ್ತ್ ಡೇ.

ಕೊನೆಮಾತು

ನಮ್ಮ ಕನ್ನಡದಲ್ಲಿ ಪಟ್ಟಿ ಮಾಡಿದ ಜನ್ಮ ದಿನದ ಹಾರೈಕೆಗಳು ನಿಮಗೆ ಉಪಯೋಗವಾಗಿದೆಯೆಂದು ನಾನು ಭಾವಿಸುತ್ತೇನೆ. ಈ ಲೇಖನವನ್ನು ಇತರರಿಗೆ ಹಂಚಿ ಮತ್ತು ನಿಮ್ಮ ಸಲಹೆ / ಅಭಿಪ್ರಾಯಗಳನ್ನು ನನ್ನ ಇಮೇಲ್ IDಗೆ ಕಳುಹಿಸಿಕೊಡಿ. ನನ್ನ ಇಮೇಲ್ ID ‘CoolHomeTechPraveen@gmail.com

ಧನ್ಯವಾದಗಳು
ಪ್ರವೀಣ್ ಕುಮಾರ್ 🙂

ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಬೇಕೇ?

ಸುಲಭವಾಗಿ ಕನ್ನಡ ಪದಗಳನ್ನು ಇಂಗ್ಲಿಷ್‌ಗೆ ಬದಲಾಯಿಸಲು ನಮ್ಮ ಉಚಿತ ಟೂಲ್ (Tool) ಬಳಸಿ.

Use Kannada to English Translator »